ಹೂವನು ಮಾರುತ ಹೂವಾಡಿಗಿತ್ತಿ
ಹೂವನು ಮಾರುತ ಹೂವಾಡಿಗಿತ್ತಿ ಹಾಡುತ ಬರುತಿಹಳು|
ಘಮ ಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು….||
ಬಿಳುಪಿನ ಮಲ್ಲಿಗೆ ,ಹಳದಿಯ ಸಂಪಿಗೆ ,ಹಸುರಿನ ಹೊಸ ಮರುಗ|
ಹಾಕಿ ಕಟ್ಟಿರುವೇ ಬೇಕೇ ಎನುತ ಹಾಡುತ ಬರುತಿಹಳು..||
ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಿಸಿನ ತಾಳೆಯಿದೆ|
ಅಚ್ಛ ಮಲ್ಲೆಯಲಿ ಪಚ್ಚೆ ತೆನೆಗಳು ಸೇರಿದ ಮಾಲೆಯಿದೆ||
ಕಂಪನು ಚೆಲ್ಲುವ ಕೆಂಪು ಗುಲಾಬಿ ಅರಳಿದ ಹೊಸ ಕಮಲ|
ಬಿಳುಪಿನ ಜಾಜಿ ಹಳದಿಯ ಜಾಜಿ ಅರಳಿದ ಬಿಳಿ ಕಮಲ||
ಹಾಕಿ ಕಟ್ಟಿರುವೇ ಬೇಕೇ ಎನುತ ಹಾಡುತ ಬರುತಿಹಳು|
ಹೂವನು ಮಾರುತ ಹೂವಾಡಿಗಿತ್ತಿ ಹಾಡುತ ಬರುತಿಹಳು||
