ಹತ್ತು ಹತ್ತು ಇಪ್ಪತ್ತು

bookmark

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು ||

ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲಿ ಒಂದು ಕಲ್ಲಿತ್ತು||

ಮೂವತ್ತು ಹತ್ತು ನಲವತ್ತು
ಎದುರಿಗೆ ಮಾವಿನ ಮರವಿತ್ತು||

ನಲವತ್ತು ಹತ್ತು ಐವತ್ತು
ಮಾವಿನ ಮರದಲಿ ಕಾಯಿತ್ತು||

ಐವತ್ತು ಹತ್ತು ಅರವತ್ತು
ಕಲ್ಲನು ಬೀಸಿದ ಸಂಪತ್ತು||

ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪ ಉದುರಿತ್ತು||

ಎಪ್ಪತ್ತು ಹತ್ತು ಎಂಬತ್ತು
ಮಾಲಿಯ ಕಂಡನು ಸಂಪತ್ತು||

ಎಂಬತ್ತು ಹತ್ತು ತೊಂಬತ್ತು
ಕಾಲುಗಳೆರಡು ನಡುಗಿತ್ತು||

ತೊಂಭತ್ತು ಹತ್ತು ನೂರು
ಮನೆಯನು ಸೇರಿದ ಸಂಪತ್ತು ||