ಏಳು ಸ್ವರವು ಸೇರಿ ಸಂಗೀತ
ಸಾ ರಿ ಗ ಮ ಪದ ನೀ…
ಸಾ ನೀ ದ ಪ ಮ ಗ ರೀ….
ಏಳು ಸ್ವರವು ಸೇರಿ ಸಂಗೀತ ವಾಯಿತು…
ಏಳು ಬಣ್ಣ ಸೇರಿ ಬಿಳಿಯ ಬಣ್ಣ ವಾಯಿತು…
ಏಳು ದಿನವೂ ಸೇರಿ ಒಂದು ವಾರವಾಯಿತು…
ಏಳು ತಾರೆ ಸಪ್ತ ಋಷಿಯ ಚಿನ್ಹೆಯಾಯಿತು…
ಕಡಲಿನಿಂದ ನೀರ ಆವಿ ಮೋಡವಾಯಿತು….
ಮೋಡ ಗಿರಿಗೆ ಮುತ್ತನಿಡೇ ಮಳೆಯು ಆಯಿತು…||twice
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು…
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು||twice
ಬೀಜ ಮೊಳೆತು ಸಸಿಯು ಆಗಿ ಹೂವು ಬಿಟ್ಟಿತು….
ಹೂವಿನಿಂದ ಹೂವಿಗೆ ದುಂಬಿ ಹಾರಿತು.|| ಹೂವಿನಿಂದ||
ದುಂಬಿಯಾಟ ಹೂವನು ಕಾಯಿ ಮಾಡಿತು…
ಕಾಯಿ ಮಾಗಿ, ಹಣ್ಣು ಆಗಿ ಬೀಜ ತಂದಿತು||twice
ಏಳು ಸ್ವರವು ಸೇರಿ ಸಂಗೀತ…….
